ಅಲೆಕ್ಸಾಂಡ್ರೆಸ್ಕೂ, ಗ್ರಿಗರಿ
(1812-1889). ರುಮೇನಿಯದ ಕವಿ. ರುಮೇನಿಯದ ಜನಾಂಗ ಮತ್ತು ಭಾಷೆಗಳಿಗೆ ಪ್ರಾಚೀನ ರೋಮನ್ ಜನಾಂಗ ಮತ್ತು ಭಾಷೆಗಳೇ ಮೂಲ ಎಂಬ ಅರಿವಿನ ಹೊಸ ದೃಷ್ಟಿಕೋನದಿಂದ ಬರೆದ ಸಾಹಿತಿಗಳ ಪಂಥಕ್ಕೆ ಸೇರಿದವ. ರಾಜಕೀಯವನ್ನು ಪ್ರವೇಶಿಸಿ ವಿದ್ಯಾಮಂತ್ರಿಯಾದ. ತನ್ನ ಕಾಲದ ಅತ್ಯುತ್ತಮ ಕವಿ. ತನ್ನ ನಾಡಿನ ಗತವೈಭವ, ಪ್ರಾಚೀನ ಸ್ಮಾರಕಗಳ ಮಹತ್ತ್ವ-ಇವು ಇವನ ಕವನಗಳ ವಸ್ತುಗಳು. ನೀತಿಕಥೆಗಳಲ್ಲಿ ಸಮಕಾಲೀನ ಸಮಾಜದ ದೋಷಗಳ ವಿಡಂಬನೆಯನ್ನು ಕಾಣಬಹುದು.
(ಎಲ್.ಎಸ್.ಎಸ್.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ